ಹಾಯ್ ಬೆಳಗೆರೆ


ಹಾಯ್ ರವಿ ಬೆಳಗೆರೆ 

ಪತ್ರಕರ್ತರನ್ನ ಆಟೋ ಡ್ರೈವರ್ ಗಳು ನೆನೆಸಿಕೊಳ್ಳೋದು ತುಂಬಾನೇ ಅಪರೂಪ. ಆದರೆ ಬಹಳಷ್ಟು ಆಟೋ ಅವ್ರಿಗೆ ಓದುವ  ಅಭ್ಯಾಸ ಇರುತ್ತೆ. ನೀವು ಸಂಜೆ ಹೊತ್ತು ಆಟೋಲಿ ಹೋದ್ರೆ "ಲೋ ಮರೀ, ಸಂಜೆ ವಾಣಿ ಕೊಡಮ್ಮ" ಅಂತ ಪೇಪರ್ ಹುಡುಗ್ರನ್ನ ಕೇಳೋದು ಅತೀ ಸಾಮಾನ್ಯ. ಅದೇ ರೀತಿ "ಹಾಯ್ ಬೆಂಗಳೂರು" ಪೇಪರ್ ಕೂಡ ತುಂಬಾ ಪಾಪ್ಯುಲರ್. ಟ್ಯಾಬ್ಲಾಯ್ಡ್ ಪತ್ರಿಕೆ ಆದರೂ ವಿಭಿನ್ನವಾದ ನೂತನ ಪ್ರಯೋಗಗಳನ್ನ ಮಾಡಿದ ವ್ಯಕ್ತಿ ರವಿ ಬೆಳಗೆರೆ. ತುಂಬಾ ಆಪ್ಯಾಯಮಾನವಾದ ಶೈಲಿಯಲ್ಲಿ ಬರೆಯುವ ರವಿಗೆ ಒಳ್ಳೆ ಹಾಸ್ಯಪ್ರಜ್ಞೆ ಕೂಡ ಇದೆ. ಇಷ್ಟೆಲ್ಲಾ ಇದ್ದರೂ ಯಾವುದೇ ಒಳ್ಳೆ ಸಿನೆಮಾಗೆ ಯಾವ ಕೊಡುಗೆಯನ್ನೂ ಕೊಡದಿರುವುದು ದೊಡ್ಡ ದುರಂತ!

Comments